ಈ ವರ್ಷದ ದೊಡ್ಡ ಹಿಟ್ ಎಂದು ಪರಿಗಣಿಸಲ್ಪಡುವ
ಚಿತ್ರ ಗೋಧಿ ಬಣ್ಣ ಸಾಧಾರಣ
ಮೈಕಟ್ಟು , ಸಧಭಿರುಚಿಯ ಶ್ರೇಷ್ಠ ಚಿತ್ರ ಎಂದು ಹೇಳಬಹುದು. ನಗರದ
ಜನ ಸಾಮಾನ್ಯರು ಕಾಣುವಂತಹ ಒಂದು ವಿಶಿಷ್ಟ ಸಮಸ್ಯೆಯನ್ನು ಎತ್ತಿಕೊಂಡು, ಚೆನ್ನಾಗಿ ವಿಶ್ಲೇಷಿಸಿ , ಮನಮುಟ್ಟುವ ನಟನೆಯೊಂದಿಗೆ ಪ್ರೇಕ್ಷಕರ ಮುಂದಿಟ್ಟ ಒಳ್ಳೆಯ ಪ್ರಯತ್ನ. ನಗರೀಕರಣದ ಸಂಕೀರ್ಣತೆ ಯಲ್ಲಿ ಮುಳಿಗಿದ ಈಗಿನ ಯುವ ಜನಾಂಗ
ಮತ್ತು ಈ ಜನಾಂಗಕ್ಕೆ ಅಂಟಿ
ಕೊಂಡಿರುವ ಅದರ ಬೇರು (ತಂದೆ
ತಾಯಂದಿರು) -- ಇವೆರಡರ ನಡುವಿನ ಅಸಹಾಯಕ ಹಾಗೂ ಅರಿವಿಲ್ಲದ ಘರ್ಷಣೆಯೇ
ಈ ಚಿತ್ರದ ಮೂಲವಸ್ತು. ಇದುವರೆಗೂ ಯಾರೂ ನಮ್ಮ ಚಿತ್ರರಂಗದಲ್ಲಿ
ಈ ವಿಷಯ ಕೈಗೆತ್ತಿಕೊಂಡಿರಲಿಲ್ಲ. ಕತೆಗಾರರಿಗೆ ಹಾಟ್ಸ್
ಆಫ್ .
ಇತ್ತೀಚಿಗೆ
ತೆರೆಕಂಡ ಹಿಂದಿ ಸಿನೆಮಾ ಪೀಕು (ಅಮಿತಾಭ್ ಬಚ್ಚನ್ , ದೀಪಿಕಾ ಪಡುಕೋಣೆ )ನೆನಪಿಗೆ ತರಬಹುದಾದ ಈ ಚಿತ್ರ, ನನಗೆ
ಕಂಡದ್ದು ಸ್ವಲ್ಪ್ ವಿಭಿನ್ನ ಮತ್ತು ಅದಕ್ಕಿಂತ ಶ್ರೇಷ್ಠ.
ಅಲ್ಜ್ಐಮರಸ್
(Alzheimer) ರೋಗದಿಂದ ನೆನಪು ಕಳೆದುಕೊಂಡ ತಂದೆ ಹಾಗೂ ತನ್ನ
ವೃತ್ತಿಯಲ್ಲಿ busy ಯಾದ ಮಗನ ನಡುವಿನ
ತಾಕಲಾಟ; ವ್ರಿದ್ಧಾಶ್ರಮದಿಂದ ಕಳೆದುಕೊಂಡ ತಂದೆ ಹಾಗೂ ಅವನ
ಹುಡುಕಾಟದ ಪ್ರಯತ್ನ; ನಾಯಕ ಹಾಗೂ ತಂದೆಯ
ಉಪಚಾರಕ್ಕಿದ್ದ ಡಾಕ್ಟರ - ಇವರಿಬ್ಬರ ಪ್ರಯತ್ನ; ಕಳೆದುಕೊಂಡ ವ್ಯಕ್ತಿಯ ಬಗ್ಗೆ ಇಬ್ಬರ ವಿಭಿನ್ನ ದೃಷ್ಟಿಕೋನ; ನಡುವೆ ಅಂಕರಿಸುವ ಸೂಕ್ಷ್ಮ ಪ್ರಣಯ, ಇವೆಲ್ಲವೂ ಸಿನೆಮಾದಲ್ಲಿ ಬಂದು ಹೋಗುವ ಮುಖ್ಯ
ಸನ್ನಿವೇಶಗಳು.
ಈ ಮಧ್ಯದಲ್ಲಿ ಕೆಲವು ಕಾಂಟ್ರಾಕ್ಟ್ ಕೇಡಿಗಳ ಆರ್ಭಟ ಹಾಗೂ ಅವರ ಕೈಯಲ್ಲಿ
ಸಿಕ್ಕಿಕೊಂಡ ತನ್ನ ಅರಿವೇ ಇಲ್ಲದ
ವಯಸ್ಕ ವ್ಯಕ್ತಿ ; ಕೇಡಿಗಳ ಸ್ಥಿತಿ , ಅವರ ಅನಿವಾರ್ಯತೆಗಳು ಹಾಗೂ
ದೌರ್ಬಲ್ಯಗಳು ಕಥೆಯಲ್ಲಿ ನುಸಿಳಿವೆ ಅನ್ನಿಸುತ್ತೆ.
Flashback ನಲ್ಲಿ
ಅನಂತ್ ನಾಗ್ ಅವರ ಅಭಿನಯ
ತುಂಬಾ ಮನೋಜ್ನ್ಯ . ಕತೆಯ ನಂತರ ಇಡೀ
ಚಿತ್ರದ ಮುಖ್ಯ ಅಂಶ ಎಂದರೆ ಅನಂತನಾಗ್
ಅವರ ಅಭಿನಯ. ರಕ್ಷಿತ್ ಹಾಗೂ ಶ್ರುತಿ ಕೂಡ ತುಂಬಾ ಅಚ್ಚುಕಟ್ಟಾಗಿ
ತಮ್ಮ ಪಾತ್ರ ತುಂಬಿದ್ದಾರೆ .
Family ಥೀಮ್ನೊಂದಿಗೆ
ಬಂದಿರುವ ಈ ಚಿತ್ರದಲ್ಲಿ ಕ್ರಿಮಿನಲ್
ಗಳ ಹಲವಾರು ದೃಶ್ಯಗಳು ಅನವಶ್ಯಕ ಅನಿಸಿದೆ. ಕಿಡ್ನಾಪ್ ಹಾಗೂ ಕೇಡಿಗಳ ಜೀವನ
, ಚಿತ್ರದ ಮುಖ್ಯ ಕತೆಗೆ ಹೊಂದಿಕೊಳ್ಳುವುದಿಲ್ಲ . ಸ್ವಲ್ಪ ಬೇರೆ ರೀತಿಯಲ್ಲಿ ಇದನ್ನು
ಚಿತ್ರಿಸಬಹುದಿತ್ತು.
ನಾಯಕ-ನಾಯಕಿ "ಕಾಣೆಯಾಗಿದ್ದಾರೆ"
poster ಅಂಟಿಸುವ ದೃಶ್ಯ ಮತ್ತೆ ಮತ್ತೆ ತೋರಿಸಿ ಚಿತ್ರದ ಬಿಗಿತವನ್ನು ಸ್ವಲ್ಪಮಟ್ಟಿಗೆ ಸಡಿಲಿಸಿದ್ದರೇನೋ ಅನಿಸುತ್ತದೆ . ಹಾಡುಗಳು ಚೆನ್ನಾಗಿದ್ದರೂ ಅವುಗಳ ಪ್ರಾಮುಖ್ಯತೆ ಸ್ವಲ್ಪ್ ಕಡಿಮೆ.
ಈ ದೃಶ್ಯಗಳನ್ನು ತೆಗೆದು ಹಾಕಿದ್ದರೆ , ಇನ್ನೂ ೧೦-೧೫ ನಿಮಿಷ
ಚಿತ್ರದ ಅವಧಿಯನ್ನು ಕಡಿಮೆ ಮಾಡಬಹುದಿತ್ತೇನೋ .
ಒಟ್ಟಾರೆ
ಈ ವರ್ಷ ಕಂಡ ಶ್ರೇಷ್ಠ
ಚಿತ್ರಗಳ ಸಾಲಿಗೆ ಗೋಧಿ ಬಣ್ಣ.. ಸೇರುವುದರಲ್ಲಿ
ಯಾವುದೇ ಸಂಶಯವಿಲ್ಲ .

