Saturday, November 26, 2016

ನನ್ನ ಮೆಚ್ಚಿನ ಚಿತ್ರ -- Life is Beautiful


ಇಟಾಲಿಯನ್ ಭಾಷೆಯ ಚಿತ್ರ ೧೯೯೭ರಲ್ಲಿ  ತೆರೆಗೆ ಬಂತುರೊಬೆರ್ಟೋ ಬೆನಿಗಿನಿ ನಟಿಸಿ ನಿರ್ದೇಶಿಸಿದ ಸಿನಿಮಾ  ಸಾಕಷ್ಟು ಆಸ್ಕರ ಪ್ರಶಿಸ್ತಿಗಳನ್ನು ಗಳಿಸಿಕೊಂಡಿತ್ತು.

Tragicomedy ತರಹದ ಚಲಚಿತ್ರ ನಗುವಿನ ಹೊನಲಿನ  ಜೊತೆಗೆ ಗಂಭೀರ ಹೃದಯವೃದ್ರಾವಕ ದೃಶ್ಯಗಳನ್ನೂ ಒಳಗೊಂಡಿದೆ.


 

ತಿಳು ಹಾಸ್ಯದೊಂದಿಗೆ ಶುರುವಾಗುವ ಕತೆ, ನಾಝಿ ಕ್ಯಾಂಪ್ ನಲ್ಲಿ ಕೊನೆಗೊಳ್ಳುತ್ತದೆ .

 

Jew ಜನಾಂಗದ ನಾಯಕನ ಪರಿವಾರವನ್ನು ಜರ್ಮನ್ ನಾಝಿ ಸೈನಿಕರು concentration ಕ್ಯಾಂಪ್ ನಲ್ಲಿ ಹಿಡಿದಿಟ್ಟಾಗ ತಂದೆ ಹಾಗೂ ಅವನ ಚಿಕ್ಕ ಮಗನ ನಡುವಿನ ಆಟ - ಒಡನಾಟ ಸಿನಿಮಾದ ವಸ್ತು. ಮಗನಿಗೆ ಏನೂ ಅರಿವಾಗದ ಹಾಗೆ ಕ್ಯಾಂಪ್ ನಲ್ಲಿನ ಎಲ್ಲ ಚಿಟುವಟಿಕೆಗಳಿಗೆ ಒಂದು ಆಟದ ಹೆಸರಿಟ್ಟು ಮಗನನ್ನು ನಾಝಿ ಸೈನಿಕರಿಂದ ಬಚ್ಚಿಡುವ ಸನ್ನಿವೇಶಗಳಂತೂ ಕಣ್ಣಲ್ಲಿ ನೀರು ತರಿಸದೇ ಇರುವುದಿಲ್ಲ. ಮಗನಿಗೆ ತಂದೆಯ ಬಗ್ಗೆ ಅಭಿಮಾನ ಹಾಗೆಯೇ ಮಗನ ಮೇಲೆ ತಂದೆಯ ಉತ್ಕಟ ಪ್ರೀತಿಯನ್ನು ನಿರ್ದೇಶನ ಹಾಗೂ ನಟನೆಯಲ್ಲಿ ಅತ್ಯುತ್ತಮವಾಗಿ ಸೆರೆಹಿಡಿಯಲಾಗಿದೆ.

 

ಚಿತ್ರಕತೆ, ನಿರ್ದೇಶನ ಹಾಗೂ ಅಭಿನಯಕ್ಕೆ ನೋಡಲೇಬೇಕಾದ ಚಿತ್ರ Life IS Beautiful.

No comments: