Saturday, November 26, 2016

ಗೋಧಿ ಬಣ್ಣ .... ನಾ ಕಂಡಂತೆ



ವರ್ಷದ ದೊಡ್ಡ ಹಿಟ್ ಎಂದು ಪರಿಗಣಿಸಲ್ಪಡುವ ಚಿತ್ರ ಗೋಧಿ ಬಣ್ಣ ಸಾಧಾರಣ ಮೈಕಟ್ಟು , ಸಧಭಿರುಚಿಯ ಶ್ರೇಷ್ಠ ಚಿತ್ರ ಎಂದು ಹೇಳಬಹುದು. ನಗರದ ಜನ ಸಾಮಾನ್ಯರು ಕಾಣುವಂತಹ ಒಂದು  ವಿಶಿಷ್ಟ  ಸಮಸ್ಯೆಯನ್ನು ಎತ್ತಿಕೊಂಡು, ಚೆನ್ನಾಗಿ ವಿಶ್ಲೇಷಿಸಿ , ಮನಮುಟ್ಟುವ  ನಟನೆಯೊಂದಿಗೆ ಪ್ರೇಕ್ಷಕರ ಮುಂದಿಟ್ಟ ಒಳ್ಳೆಯ ಪ್ರಯತ್ನನಗರೀಕರಣದ ಸಂಕೀರ್ಣತೆ ಯಲ್ಲಿ ಮುಳಿಗಿದ ಈಗಿನ ಯುವ ಜನಾಂಗ ಮತ್ತು ಜನಾಂಗಕ್ಕೆ ಅಂಟಿ ಕೊಂಡಿರುವ ಅದರ ಬೇರು (ತಂದೆ ತಾಯಂದಿರು) -- ಇವೆರಡರ ನಡುವಿನ ಅಸಹಾಯಕ ಹಾಗೂ ಅರಿವಿಲ್ಲದ ಘರ್ಷಣೆಯೇ ಚಿತ್ರದ ಮೂಲವಸ್ತು. ಇದುವರೆಗೂ ಯಾರೂ ನಮ್ಮ ಚಿತ್ರರಂಗದಲ್ಲಿ ವಿಷಯ ಕೈಗೆತ್ತಿಕೊಂಡಿರಲಿಲ್ಲ. ಕತೆಗಾರರಿಗೆ ಹಾಟ್ಸ್ ಆಫ್ .
 
 

ಇತ್ತೀಚಿಗೆ ತೆರೆಕಂಡ ಹಿಂದಿ ಸಿನೆಮಾ ಪೀಕು (ಅಮಿತಾಭ್ ಬಚ್ಚನ್ , ದೀಪಿಕಾ ಪಡುಕೋಣೆ )ನೆನಪಿಗೆ ತರಬಹುದಾದ ಚಿತ್ರ, ನನಗೆ ಕಂಡದ್ದು ಸ್ವಲ್ಪ್ ವಿಭಿನ್ನ ಮತ್ತು ಅದಕ್ಕಿಂತ  ಶ್ರೇಷ್ಠ.

 

ಅಲ್ಜ್ಐಮರಸ್ (Alzheimer) ರೋಗದಿಂದ ನೆನಪು ಕಳೆದುಕೊಂಡ ತಂದೆ ಹಾಗೂ ತನ್ನ ವೃತ್ತಿಯಲ್ಲಿ busy ಯಾದ ಮಗನ ನಡುವಿನ ತಾಕಲಾಟ; ವ್ರಿದ್ಧಾಶ್ರಮದಿಂದ ಕಳೆದುಕೊಂಡ ತಂದೆ ಹಾಗೂ ಅವನ ಹುಡುಕಾಟದ ಪ್ರಯತ್ನ; ನಾಯಕ ಹಾಗೂ ತಂದೆಯ ಉಪಚಾರಕ್ಕಿದ್ದ  ಡಾಕ್ಟರ - ಇವರಿಬ್ಬರ ಪ್ರಯತ್ನ; ಕಳೆದುಕೊಂಡ ವ್ಯಕ್ತಿಯ ಬಗ್ಗೆ ಇಬ್ಬರ ವಿಭಿನ್ನ ದೃಷ್ಟಿಕೋನ; ನಡುವೆ ಅಂಕರಿಸುವ ಸೂಕ್ಷ್ಮ ಪ್ರಣಯ, ಇವೆಲ್ಲವೂ ಸಿನೆಮಾದಲ್ಲಿ ಬಂದು ಹೋಗುವ ಮುಖ್ಯ ಸನ್ನಿವೇಶಗಳು.

 

ಮಧ್ಯದಲ್ಲಿ ಕೆಲವು ಕಾಂಟ್ರಾಕ್ಟ್ ಕೇಡಿಗಳ ಆರ್ಭಟ ಹಾಗೂ ಅವರ ಕೈಯಲ್ಲಿ ಸಿಕ್ಕಿಕೊಂಡ ತನ್ನ ಅರಿವೇ ಇಲ್ಲದ ವಯಸ್ಕ ವ್ಯಕ್ತಿಕೇಡಿಗಳ ಸ್ಥಿತಿ , ಅವರ ಅನಿವಾರ್ಯತೆಗಳು ಹಾಗೂ ದೌರ್ಬಲ್ಯಗಳು ಕಥೆಯಲ್ಲಿ ನುಸಿಳಿವೆ ಅನ್ನಿಸುತ್ತೆ.

 

Flashback ನಲ್ಲಿ ಅನಂತ್ ನಾಗ್ ಅವರ ಅಭಿನಯ ತುಂಬಾ ಮನೋಜ್ನ್ಯ . ಕತೆಯ ನಂತರ ಇಡೀ ಚಿತ್ರದ ಮುಖ್ಯ ಅಂಶ ಎಂದರೆ ಅನಂತನಾಗ್ ಅವರ ಅಭಿನಯ. ರಕ್ಷಿತ್  ಹಾಗೂ  ಶ್ರುತಿ ಕೂಡ ತುಂಬಾ ಅಚ್ಚುಕಟ್ಟಾಗಿ ತಮ್ಮ ಪಾತ್ರ ತುಂಬಿದ್ದಾರೆ .

 

Family ಥೀಮ್ನೊಂದಿಗೆ ಬಂದಿರುವ ಚಿತ್ರದಲ್ಲಿ ಕ್ರಿಮಿನಲ್ ಗಳ  ಹಲವಾರು ದೃಶ್ಯಗಳು ಅನವಶ್ಯಕ ಅನಿಸಿದೆ. ಕಿಡ್ನಾಪ್ ಹಾಗೂ ಕೇಡಿಗಳ ಜೀವನ , ಚಿತ್ರದ ಮುಖ್ಯ ಕತೆಗೆ ಹೊಂದಿಕೊಳ್ಳುವುದಿಲ್ಲ . ಸ್ವಲ್ಪ ಬೇರೆ ರೀತಿಯಲ್ಲಿ ಇದನ್ನು ಚಿತ್ರಿಸಬಹುದಿತ್ತು.

ನಾಯಕ-ನಾಯಕಿ  "ಕಾಣೆಯಾಗಿದ್ದಾರೆ"  poster ಅಂಟಿಸುವ ದೃಶ್ಯ ಮತ್ತೆ ಮತ್ತೆ ತೋರಿಸಿ ಚಿತ್ರದ ಬಿಗಿತವನ್ನು ಸ್ವಲ್ಪಮಟ್ಟಿಗೆ ಸಡಿಲಿಸಿದ್ದರೇನೋ ಅನಿಸುತ್ತದೆ . ಹಾಡುಗಳು ಚೆನ್ನಾಗಿದ್ದರೂ ಅವುಗಳ ಪ್ರಾಮುಖ್ಯತೆ ಸ್ವಲ್ಪ್ ಕಡಿಮೆ.

ದೃಶ್ಯಗಳನ್ನು ತೆಗೆದು ಹಾಕಿದ್ದರೆಇನ್ನೂ ೧೦-೧೫ ನಿಮಿಷ ಚಿತ್ರದ ಅವಧಿಯನ್ನು ಕಡಿಮೆ ಮಾಡಬಹುದಿತ್ತೇನೋ .

 

ಒಟ್ಟಾರೆ ವರ್ಷ ಕಂಡ ಶ್ರೇಷ್ಠ ಚಿತ್ರಗಳ ಸಾಲಿಗೆ ಗೋಧಿ ಬಣ್ಣ..  ಸೇರುವುದರಲ್ಲಿ ಯಾವುದೇ ಸಂಶಯವಿಲ್ಲ

No comments: