ಸ್ನೇಹಿತರೊಬ್ಬರು ಹೇಳಿದ ಕಥೆ .
ಮುಂಚೆ ನಮ್ಮೂರಾಚೆ ಮಂಡಕ್ಕಿ/ಚುರುಮುರಿ-ಮಿರ್ಚಿ-ಚಹಾ ಅಂಗಡಿಗಳ ಸಾಲುಗಳು. ಹೊಲ ಗದ್ದೆಗಳಲ್ಲಿ ದಿನವಿಡೀ ಕೆಲಸ ಮಾಡಿ ಮನೆಗೆ ಮರಳುತ್ತಿರುವ ರೈತರಿಗೆ ವಿಶ್ರಾಂತಿಯ ಒಂದು ಜಾಗ. ಹರಟೆಯ ಕಟ್ಟೆ ಕೂಡ.
ಇತ್ತೀಚೆಗೆ ನಮ್ಮ ಹಳ್ಳಿಗೂ ಕೂಡ ನಗರದಂತೆ ಚಿಕನ್ ಕಬಾಬ್ (chicken kabab) ಸ್ಟಾಲ್ಗಳು ಕಾಲಿಟ್ಟು ಮಂಡಕ್ಕಿ ಅಂಗಡಿಗಳು ಮುಚ್ಚುತ್ತಿರುವುದು ಒಂದು ಪರಿವರ್ತನೆ. ಈ ಬದಲಾವಣೆಯಿಂದ ಬೇಸತ್ತ ಹಿರಿಯರಿಗೆ ಒಂದು ಸಾಂತ್ವನ ಕೊಟ್ಟಿದ್ದು ಹೀಗೆ.
ನನ್ನ ಮಿತ್ರರೊಬ್ಬರ ತರ್ಕ ---"ಬಿತ್ತಿದ್ದುಣ್ಣೋ ಮಹರಾಯ".
ಮುಂಚೆ ಭತ್ತ ನಮ್ಮ ಕಡೆಯ ಹಳ್ಳಿಯ ಮುಖ್ಯ ಬೆಳೆ. ಭತ್ತದಿಂದ ಅಕ್ಕಿ ಹಾಗೂ ಚುರುಮರಿ/ಮಂಡಕ್ಕಿ ಮಾಡುವುದು ಸಾಮಾನ್ಯ. ಹೀಗಾಗಿ ಮಂಡಕ್ಕಿ-ಮಿರ್ಚಿ-ಚಹಾ ಅಂಗಡಿಗಳು ಬೆಳೆದು ಬಂದವು.
ಇತ್ತೀಚೆಗೆ ಆದ "ಸುಧಾರಣೆಯ" ಫಲವಾಗಿ , ವ್ಯವಸಾಯ ಮಾಡುವವರ ಸಂಖ್ಯೆ ಕಡಿಮೆ. ಜಾಮೀನಿನ ಫಲವತ್ತತೆ ಕುಸಿದಿದೆ. ಒಕ್ಕಲುತನ ಮಾಡುವದು ಕಷ್ಟದ ಕೆಲಸ. ಹೊಲವನ್ನು ಕಾಂಟ್ರಾಕ್ಟ್ ಕೊಡುವುದು ಸಾಮಾನ್ಯ. ಹೀಗಾಗಿ, ಅತಿ ಕಡಿಮಿ ಶ್ರಮದಲ್ಲಿ ಬೆಳೆಯುವ ಮೆಕ್ಕೆಜೋಳದ ಬಿತ್ತನೆ ಜಾಸ್ತಿ. ಇಳುವರಿಗೆ ಯಾವದೇ ಖೋತಾ ಇಲ್ಲ; ಕಾಸು ಗ್ಯಾರಂಟೀ.
ಮೆಕ್ಕೆ ಕಾಳು (Corn) ಮನುಷ್ಯನ ಆಹಾರವಲ್ಲ. ಕೋಳಿಯ ಆಹಾರವಾಗಿ ಅದಕ್ಕೆ ತುಂಬಾ ಬೇಡಿಕೆ. ಹೀಗೆ ಕೋಳಿಯ ಸಂಖ್ಯೆ ಬೆಳೆದು ; ಜೊತೆಗೆ ಕೋಳೀತಿನ್ನುವವರ ಸಂಖ್ಯೆಯೂ ಬೆಳೆದಿದೆ.
ಬತ್ತ ಬೆಳೆದರೆ ಮಂಡಕ್ಕಿ ಅಂಗಡಿ: ಮೆಕ್ಕೆ ಜೋಳದಿಂದ ಚಿಕನ್ ಕಬಾಬ್. ಯಾವುದೇ ತಪ್ಪಿಲ್ಲ.
ಬಿತ್ತಿದ್ದುಣ್ಣೊ ಮಹರಾಯ.
So, eat what you sow.